Sri sadguru
Toggle navigation
Home
About Us
History
Kannada
English
Gallery
Bhajans
Images
Videos
Gurubhandhu's Experience
Text
Audio
Video
Events
Login/Register
Gurubhandhu List
Uploader Details
Description
Uploader Details
Description
admin,mys
ಓಂ ಅವಧೂತ ವೇಂಕಟಾಚಲ ಸದ್ಗುರುವೆ ನಮಃ ಹದಿನೈದು ದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನಾನು, ಗುರುವಿನ ದರ್ಶನ ಮಾಡಲು ನನ್ನ ಸಮಯ ಬರುವವರೆಗೂ ಕಾಯುತ್ತಾ ಕುಳಿತೆ. ತಾಯಿಯನ್ನು ಕಳೆದುಕೊಂಡ ದುಃಖ ವಿಪರೀತ ಬಾಧಿಸುತ್ತಿರುವ ಆ ದಿನ, ಗುರುವಿನ ಮನೆಯಲ್ಲಿ ಹಲವಾರು ಹೆಂಗಸರುಗಳಿಂದ ತಾಯಿಯನ್ನು ಕುರಿತಾಗಿಯೇ ಹಾಡುತ್ತಿದ್ದ ಹಾಡುಗಳು ನನ್ನ ಕಿವಿಗಪ್ಪಳಿಸಿ ನನ್ನ ದುಃಖವನ್ನು ಮತ್ತಷ್ಟು ಹೆಚ್ಚುಸುತಿತ್ತು. ಅದೇ ಸಂದರ್ಭದಲ್ಲಿ ಸದ್ಗುರುವಿನ ದರ್ಶನದ ಸುಯೋಗವು ಪ್ರಾಪ್ತಿಯಾಯಿತು. ಸರ್ವಾಂತರ್ಯಾಮಿಯಾದ ಗುರುದೇವರು ನನ್ನನ್ನು ಕುರಿತು ಯಾರು?,ಎಲ್ಲಿಂದ ಬಂದೆ ? ಬಂದ ಉದ್ದೇಶ ಇತ್ಯಾದಿಯಾಗಿ ಪ್ರಶ್ನಿಸಲು, ತಮಗೆ ತಿಳಿದಿರುವುದಲ್ಲಾ ಗುರುಗಳೇ ಎಂದು ಉತ್ತರಿಸಿದ ನನಗೆ,ಬಾಯಿ ಬಿಟ್ಟು ಹೇಳಬೇಕು ಎಂದು ಹೇಳಿದ ಗುರುಗಳ ಸನ್ನಿಧಿಯಲ್ಲಿ ನಿಲ್ಲಲಾರದೆ ಹೊರಗೆ ಬಂದು ಕುಳಿತೆ. ಸ್ವಲ್ಪ ಸಮಯದ ನಂತರ ನನ್ನ ಚಲನ-ವಲನಗಳನ್ನು ಗಮನಿಸುತ್ತಿದ್ದ ಗುರುಸೇವಕರೊಬ್ಬರು ಮತ್ತೆ ಗುರುಗಳ ಹತ್ತಿರ ಹೋಗುವಂತೆ ಪ್ರೇರೇಪಿಸಲು ಅವರ ಆಣತಿಯಂತೆ ಪುನಃ ಗುರುವಿನ ಸಮೀಪಕ್ಕೆ ತೆರಳಿದ ನನ್ನನ್ನು ,ಗುರುಗಳು ಪುನಃ ಪ್ರಶ್ನಿಸಿದರು. ತಾಯಿಯ ಸಾವಿನ ಸುದ್ದಿಯನ್ನು ಗುರುಗಳಿಗೆ ತಿಳಿಸಿದ ನನಗೆ, ಯಾವಾಗ ? ಎಷ್ಟು ದಿನ ಆಯ್ತು ಎಂದು ಪ್ರಶ್ನಿಸಲು, ೧೫ ದಿನಗಳಾಯಿತು ಎಂದು ದುಗುಡದಿಂದ ಉತ್ತರ ಕೊಟ್ಟೆ . ಆನಂತರ ನನಗೆ ಊಟ ಮಾಡುವಂತೆ ತಿಳಿಸಿ ,ಆ ಮನೆಯ ಸೇವಾ ಮಹಿಳೆಯೊಬ್ಬರಿಗೆ ಊಟ ಬಡಿಸುವಂತೆ ಹೇಳಿ,ತಮ್ಮ ನಿವಾಸದ ಹಿತ್ತಲಿನ ಕಡೆಗೆ ಹೋದರು. ಊಟ ಮುಗಿಸಿದ ಬಳಿಕ ,ಬಡಿಸಿದ ಆ ಮಹಿಳೆಗೆ ಗುರುಗಳನ್ನು ಮತೊಮ್ಮೆ ದರ್ಶನ ಮಾಡಿ ಊರಿಗೆ ತೆರಳುತ್ತೇನೆಂದು ತಿಳಿಸಿದ ನನಗೆ, ಆ ಮಹಿಳೆ ತುಂಬ ಬೇಸರದಿಂದ, ಗುರುಗಳು ಬೆಳಗಿನಿಂದ ನಿರಾಹಾರಿಗಳಾಗಿ ಬಂದ ಭಕ್ತಾದಿಗಳ ಕಷ್ಟವನ್ನು ನೀಗಿಸುತ್ತಾ , ಸ್ವಲ್ಪವು ಆಹಾರವನ್ನು ತೆಗೆದುಕೊಂಡಿಲ್ಲ. ನೀವು ಪದೇ ಪದೇ ಹೀಗೆ ತೊಂದರೆ ಕೊಡಬಹುದಾ ?ಎಂದು ಸ್ವಲ್ಪ ಖಾರವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದರೂ ಸಹಿತ,ಗುರುವನ್ನು ದರ್ಶನ ಮಾಡಲೇಬೇಕೆಂಬ ತೀವ್ರತೆ ನನ್ನನ್ನು ಪುನಃ ಗುರುಗಳಿದ್ದಲ್ಲಿಗೆ ಕರೆದುಕೊಂಡು ಹೋಯಿತು. ಹಿತ್ತಲಲ್ಲಿ ಕುಳಿತಿದ್ದ ಗುರುಗಳ ಸುತ್ತ ಕೆಲವು ಭಕ್ತರು ನೆರೆದಿದ್ದರು.ಜೊತೆಗೆ ವೇದಘೋಷವನ್ನು ಮಾಡುತ್ತಿದರು. ಆನಂತರ ನೇರವಾಗಿ ಗುರುಗಳ ಎದುರಿಗೆ ನಿಂತುಕೊಂಡಿದ್ದ ನನ್ನನ್ನು ಉದ್ದೇಶಿಸಿ, ಗುರುಗಳ ಎದುರಿಗೆ ನಿಂತ್ಕೊಳ್ತಾರೇನಯ್ಯ? ಎನ್ನಲು ಅವರ ಎದುರಿಗೆ ನೇರವಾಗಿ ನಿಂತಿದ್ದ ನಾನು ಪಕ್ಕಕ್ಕೆ ಸರಿದೆ. ಆ ಸಂದರ್ಭದಲ್ಲಿ , ಅವರ ಎದುರಿಗೆ ಹಾಗೆ ನಿಲ್ಲಬಾರದು ಎಂಬ ಕನಿಷ್ಠ ತಿಳುವಳಿಕೆಯೂ ನನ್ನಲ್ಲಿರಲಿಲ್ಲ . ಸ್ವಲ್ಪ ಸಮಯದ ನಂತರ ಹಸು,ಕರುಗಳೆಲ್ಲ ಆ ಹಿತ್ತಲ ಮೂಲಕ ಬಂದು ಕೊಟ್ಟಿಗೆಯ ಕಡೆಗೆ ಹೊರಟವು. ಅದೇ ಸಮಯಕ್ಕೆ ಸರಿಯಾಗಿ ನನಗೆ ಉಣಬಡಿಸಿದ ಆ ಮಹಿಳೆಯೇ ತಟ್ಟೆಯೊಂದರಲ್ಲಿ ಊಟವನ್ನು ಕಲಸಿಕೊಂಡು ಬಂದು ಗುರುಗಳಿಗೆ ತಿನ್ನಿಸಲು ಮುಂದಾದರು.ಅಷ್ಟು ಸುಲಭವಾಗಿ ಊಟವನ್ನು ಮಾಡಲು ಮುಂದಾಗದ ಗುರುಗಳು ೫-೬ ಬಾರಿ ಮುಖವನ್ನು ಆಕಡೆ-ಈಕಡೆ ಮಾಡಿ ನನ್ನ ಕಡೆ ನೋಡುತ್ತ “ಇವರಿಗೇನು ಗೊತ್ತು ನಾನು ಊಟ ಏನು ಮಾಡ್ತೀನಿ ಅಂತ “ ಮತೊಮ್ಮೆ ನನ್ನೆಡೆಗೆ ಬಂದ ಅವರ ಪ್ರಶ್ನೆ ನನ್ನ ಅಂತರಂಗಕ್ಕೆ ನಾಟಿ,ತನ್ನ ಬಾಯಿನಿಂದಲೇ ಊಟ ಮಾಡಿ ಹಸಿವು ನೀಗಿಸಿಕೊಳ್ಳುವ ಜೀವ ಇದಲ್ಲ, ಸಮಸ್ತ ಜೀವಿಗಳೆಲ್ಲರ ಸಂಕಟ ವಿಮೋಚನೆಗೊಳಿಸಿ, ಸಂತೃಪ್ತಿಯನ್ನು ಕರುಣಿಸಿ, ಆ ತನ್ಮೂಲಕ ಆತ್ಮಾನಂದವನ್ನು ಅನುಭವಿಸುತ್ತಿರುವ ಸಹಜ ಸದ್ಗುರುದೇವ ಎಂಬ ಪ್ರಾತ್ಯಕ್ಷಿಕ ಅನುಭವವನ್ನು ಕರುಣಿಸಿದ ಪ್ರೀತಿಯ ಅವಧೂತ ಸದ್ಗುರುಗಳಿಗೆ ನಮಸ್ಕಾರ . ಗುರುಪ್ರಿಯ ಮೈಸೂರು
MANJUNATH,MYSORE
ಶ್ರೀ ಗುರುಭ್ಯೋ ನಮಃ ನನ್ನ ತಾಯಿ ಅವಧೂತರ ನಿವಾಸಕ್ಕೆ ತೆರಳಿ ಅವರ ದರ್ಶನ ಆಶೀರ್ವಾದ ಪಡೆದು ಹೊರಡುವಾಗ, " ಗುರುನಾಥರು ನಮ್ಮ ಮನೆಗೆ ಬಂದು ಅನುಗ್ರಹಿಸಬೇಕು" ಎಂದು ಕೇಳಿಕೊಂಡರು. ಮತ್ತು ಅವರಿಗೆ ನಮ್ಮ ಮನೆ ವಿಳಾಸ ಹೇಳಲು ಮುಂದಾದಾಗ, ಗುರುನಾಥರು, " ನಿಮ್ ಮನೆ ಮೈಸೂರಿನ ಆ ಬೀದಿಯಲ್ಲಿರೋದಲ್ವೇ?, ಆ ಬೀದೀಲಿ ಇಷ್ಟು ಮನೆಗಳಿದೆ ಅಲ್ವೇ, ಮನೆ ಎದುರು ಒಂದು ಬೀದಿ ದೀಪದ ಕಂಬ, ಪಕ್ಕದಲಿ ಒಂದು ಕೊಳವೆ ಬಾವಿ ಇದೆ ಅಲ್ವೇ, ಮನೆ ಒಳಗೆ ಇಂತಿಂಥಾ ವಸ್ತುಗಳು ಇಲ್ಲಿಲ್ಲೇ ಇವೆ ಅಲ್ವೇ," ಮುಂತಾಗಿ ಹೇಳಿ ಅಚ್ಚರಿ ಮೂಡಿಸಿದರು. ಗುರು ಎಂದರೆ ಶಿಷ್ಯರ ಪೂರ್ವಾಪರಗಳನ್ನು ಅರಿತವರಾಗಿರುತ್ತಾರೆ ಮುಂತಾಗಿ ತಿಳಿಸಿಕೊಟ್ಟರು. ಮಂಜುನಾಥ್, ಮೈಸೂರು